Posts

ಹನುಮಂತ ದೇವರ ಸಾವಿನ ಬಗ್ಗೆ ಎಲ್ಲೂ ಉಲ್ಲೇಖವಿಲ್ಲವೇಕೆ? ಜೀವಂತವಾಗಿರುವನೇ ಮಾರುತಿ?

ತೇತ್ರಾಯುಗದಲ್ಲಿ ರಾಮನ ಅವತಾರ ಮುಗಿಯುವ ಸಂದರ್ಭದಲ್ಲಿ ಕೇಸರಿ ತನಯ ರಾಮಬಂಟನಾದ ಹನುಮಂತನಿಗೆ ವಿಶೇಷ ವರವೊಂದನ್ನು ಕರುಣಿಸುತ್ತಾನಂತೆ. ಅದೇನೆಂದರೆ ರಾಮಯಾಣ ಮಹಾಗ್ರಂಥದ ಕಥೆ ಜನರ ಬಾಯಿಯಲ್ಲಿ ಎಷ್ಟು ಸಮಯ ಭೂಮಿಯಲ್ಲಿ ಉಳಿದುಕೊಳ್ಳುತ್ತೋ ಅಷ್ಟು ಸಮಯ ಹನುಮಂತನಿಗೆ ಜೀರಂಜೀವಿಯ ವರವನ್ನು ಕರುಣಿಸಿದ ಎಂದು ಪುರಾಣದ ಕಥೆಗಳು ಹೇಳುತ್ತೆ. ಪುರಾಣವನ್ನು ಕೆದುಕುತ್ತಾ ಹೋದರೆ ದ್ವಾಪರಯುಗದಲ್ಲಿ ನಡೆದ ಮಹಾಭಾರತದ ಕಥೆಯಲ್ಲಿ ಹನುಮಂತನ ಪಾತ್ರವನ್ನು ಕೂಡ ನಾವು ಕೇಳಿದ್ದೇವೆ ಅಲ್ವೇ?. ಪುರಾಣದ ಕಥೆಗಳು ಒಂದು ಕಡೆಯಾದರೆ ಆಧುನಿಕ ಕಂಪ್ಯೂಟರ್ ಯುಗದಲ್ಲಿ ಹನುಮನ ಭಕ್ತರ ಸಾಲಿಗೇನು ಕೊರತೆಯಿಲ್ಲ. ಹೌದು.. ಕಳೆದ 2011ರ ವಿಶ್ವಕಪ್‍ನ್ನು ಜಯಿಸಿದ ನಂತರ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಒಂದು ಮಹಾಸತ್ಯ ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ತಾನು ಹನುಮಾನ್ ಚಾಲೀಸ್‍ನ್ನು ಪ್ರತಿನಿತ್ಯ ಬೆಳಗ್ಗೆ ಕೇಳುತ್ತೇನೆಂದು, ಅಲ್ಲದೇ ತನ್ನಲ್ಲಿರುವ ಅಧ್ಯಾತ್ಮದ ಬಗೆಗಿರುವ ಒಲವನ್ನು ತೋಡಿಕೊಂಡಿದ್ದಾರೆ. ಇದು ನಮ್ಮ ದೇಶದ ಸೆಲೆಬ್ರಿಟಿಯ ಕಥೆಯಾದರೆ ಇನ್ನು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತನ್ನ ಜೇಬಿನಲ್ಲಿ ಕಿರು ಹನುಮಂತನ ಪ್ರತಿಮೆಯನ್ನು ಇಟ್ಟುಕೊಂಡು ಒಡಾಡುತ್ತಾರೆ, ಇದು ಒಬಾಮ ಹನುಮಂತನಲ್ಲಿ ಇಟ್ಟಿರುವ ಅಪಾರವಾದ ನಂಬಿಕೆ ಎಂದರೆ ಇದನ್ನು ನೀವು ನಂಬಲೇಬೇಕಾಗಿರುವ ಸತ್ಯ ಸಂಗತಿ. ಹಿಂದೂ ಪುರಾಣದ ಪ್ರಕಾರ ಜನ್ಮ ಮತ್ತು ಪುನರ್‍ಜನ್ಮದ ಬಗ್ಗೆ ಅಪಾರವಾದ ನಂಬಿಕ